ಬಲಿ ಚಕ್ರವರ್ತಿ-ರಾವಣನ ಕತೆ
ಹಿರಣ್ಯಕಶಿಪುವಿನ ಮಗ ಭಕ್ತ ಪ್ರಹ್ಲಾದನ ಕತೆ ಯಾರಿಗೆ ತಾನೆ ತಿಳಿದಿಲ್ಲ. ಸಾಮಾನ್ಯವಾಗಿ ಪುರಾಣವನ್ನು ಓದಿದವರೆಲ್ಲರಿಗೂ ಈ ಕತೆ ಖಂಡಿತ ತಿಳಿದಿರುತ್ತದೆ.
ಹಾಗೆಯೇ ಬಲಿಚಕ್ರವರ್ತಿಯ ಕತೆ ಕೂಡ. ಆದರೆ, ಭಕ್ತ ಪ್ರಹ್ಲಾದನ ಮೊಮ್ಮಗನೇ ಬಲಿಚಕ್ರವರ್ತಿಯೆಂಬುದು ಬಹಳಷ್ಟು ಜನಕ್ಕೆ ತಿಳಿದಿರಲಾರದು.ಆ ಕತೆಯ
ಹಿನ್ನೆಲೆಗೆ ಹೋದಾಗ, ಬಲಿಚಕ್ರವರ್ತಿಯು ದಾನಶೂರನೆಂದು ಮೂರು ಲೋಕಗಳಲ್ಲಿಯೂ ಮೆರೆದಾಡುತ್ತಿರುವಾಗ, ಈತನ ದಾನಶೂರತ್ವವನ್ನು ಪರೀಕ್ಷಿಸಿಯೇ
ತೀರಬೇಕೆಂದು ಶ್ರೀಹರಿ ವಿಪ್ರ ವಾಮನನ ಅವತಾರದಲ್ಲಿ ಭೂಲೋಕಕ್ಕೆ ಬಂದು ಬಲಿಯನ್ನು ಮೂರು ಪಾದ ಭೂಮಿ ಕೇಳಿ ಆತ ಬಡ ಬ್ರಾಹ್ಮಣನಿಗೆ ಮೂರು ಪಾದ
ಭೂಮಿ ತಾನೆ ಎಂದು ಕೊಡಲೊಪ್ಪಿದಾಗ, ಒಂದು ಪಾದದಿಂದ ಭೂಮಿಯನ್ನು ಮೆಟ್ಟಿ ನಿಂತು, ಮತ್ತೊಂದು ಪಾದವನ್ನು ಆಕಾಶಕ್ಕೆ ಚಾಚಿ ನಿಂತು ಮೂರನೆಯ
ಪಾದವನ್ನು ಎಲ್ಲಿಡಲೆಂದು ಕೇಳಿದಾಗ ತನ್ನ ಶಿರವನ್ನು ತೋರಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡು ವಾಮನ ಆತನನ್ನು ಪಾತಾಳಕ್ಕೆ ನೂಕಿದ್ದು, ಆ
ನಂತರ ಬಲಿಚಕ್ರವರ್ತಿಯ ಅಪೇಕ್ಷೆಯಂತೆ ಆತನ ಅರಮನೆಯ ದ್ವಾರಪಾಲಕನಾಗಿ ನಿಂತವರೆಗಿನ ಕತೆ ನಮಗೆಲ್ಲ ತಿಳಿದಿದೆ. ಆದರೆ, ರಾವಣ ಮತ್ತು
ಬಲಿಚಕ್ರವರ್ತಿಗೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಪ್ರಸಂಗವನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಬಲಿಚಕ್ರವರ್ತಿಯು ಭವ್ಯವಾದ ಒಂದು ಅರಮನೆಯನ್ನು
ಹೊಂದಿದ್ದನು. ರಾವಣ ಒಮ್ಮೆ ಇದೇ ಮಾರ್ಗವಾಗಿ ಸಂಚರಿಸುತ್ತಿರುವಾಗ, ಈ ಅರಮನೆಯ ಭವ್ಯತೆಗೆ ಮರುಳಾಗಿ ಯಾರದಿರಬಹುದೆಂಬ ಕುತೂಹಲದಿಂದ
ಒಳಹೋಗಲು ಯತ್ನಿಸಿ ವಿಫಲನಾಗಿ ಈ ಅರಮನೆ ಯಾರದೆಂದು ತಿಳಿದು ಬನ್ನಿರೆಂದು ತನ್ನ ದೂತರನ್ನು ಅಟ್ಟಿದನು. ಅವರು ಏಳು ಪ್ರವೇಶ ದ್ವಾರಗಳನ್ನು
ದಾಟಿ ಏಳನೇ ದ್ವಾರದಲ್ಲಿ ಏಳು ಸೇವಕರನ್ನು ಕಂಡು ಒಳನುಗ್ಗಲು ಪ್ರಯತ್ನಿಸಿದಾಗ ಅಲ್ಲಿಯೇ ಇದ್ದ ದೈತ್ಯಾಕಾರದ ವ್ಯಕ್ತಿಯ ಅಟ್ಟಹಾಸಕ್ಕೆ ಹೆದರಿ ಹಿಂದಿರುಗಿ
ರಾವಣನಿಗೆ ವರದಿ ಮಾಡಿದರು. ರಾವಣ ತಾನೇ ಹೋಗಿ ಆ ವ್ಯಕ್ತಿಯನ್ನು ಕಂಡನು. ಆದರೆ ತಾನೂ ಕೂಡ ಆ ವ್ಯಕ್ತಿಯ ಅಟ್ಟಹಾಸಕ್ಕೆ ಭಯಭೀತನಾದನು.
ಆ ವ್ಯಕ್ತಿಯು ಲಂಕೇಶ್ವರನ ಪರಿಚಯ ಕೇಳಲು ಭಯದಿಂದಲೇ ತನ್ನ ಪರಿಚಯವನ್ನು ಮಾಡಿಕೊಂಡು ತಾನು ಬಲಿಚಕ್ರವರ್ತಿಯೊಂದಿಗೆ ಕಾದಾಡಲು ಬಂದಿರುವ
ವಿಷಯ ತಿಳಿಸಿದನು. ಆಗ ಗಹಗಹಿಸಿ ನಕ್ಕ ಆ ವ್ಯಕ್ತಿಯು ನನ್ನ ನೋಡಿಯೇ ಥರಥರ ನಡುಗುವ ನಿನಗೆ ಬಲಿಯೊಂದಿಗೆ ಯುದ್ಧವೇ! ನಿನಗೆ ನಿಜಕ್ಕೂ
ಬಲವಿದ್ದಲ್ಲಿ ಪರೀಕ್ಷಿಸಿಕೋ ಹೋಗು ಎಂದು ಒಳಗೆ ಬಿಟ್ಟನು. ರಾವಣನು ಅಟ್ಟಹಾಸದಿಂದ ಒಳಗೆ ಪ್ರವೇಶಿಸುತ್ತಿದ್ದಂತೆ, ಬಲಿಚಕ್ರವರ್ತಿಯು ಆತನನ್ನು
ಬರಸೆಳೆದು ತನ್ನ ತೊಡೆಯ ಮೇಲೆ ಕೂರಿಸಿಕೊಂಡು, ಕುಶಲವನ್ನು ವಿಚಾರಿಸಿ, ಶ್ರೇಷ್ಠ ಪುಲಸ್ತ್ಯ ವಂಶಕ್ಕೆ ಸೇರಿದ ನೀನು ಹೀಗೆ ನಡೆದುಕೊಳ್ಳುವುದು ನಿನಗೆ
ಉಚಿತವಲ್ಲ. ಈ ಅರಮನೆಯಲ್ಲಿ ಶ್ರೀಮನ್ನಾರಾಯಣನೇ ವಾಸವಾಗಿರುವನು. ಅರಮನೆಯ ಪ್ರವೇಶ ದ್ವಾರದಲ್ಲಿ ನೀನು ಕಂಡ ದೈತ್ಯಾಕಾರದ ವ್ಯಕ್ತಿಯೇ
ಅವನು. ನನ್ನೊಂದಿಗೆ ಕಾದಾಡುವ ದುರಾಲೋಚನೆಯನ್ನು ಬಿಟ್ಟು ಹಿಂದಿರುಗು ಎಂದು ಹೇಳಿ ಕಳುಹಿಸಿದನು. ತಕ್ಷಣವೇ ಅಲ್ಲಿಂದ ಹೊರಟ ರಾವಣೇಶ್ವರನು
ಆ ಶ್ರೀಹರಿಯೊಂದಿಗೆ ಕಾದಾಡುವೆನೆಂದು ಹೊರಬಂದು ನೋಡಿದಾಗ ಆ ವ್ಯಕ್ತಿ ಅಲ್ಲಿರಲೇ ಇಲ್ಲ.ಆಗ ರಾವಣೇಶ್ವರ ಬಲಿಚಕ್ರವರ್ತಿಯನ್ನು ತಾನು ಗೆದ್ದು ಬಿಟ್ಟೆ,
ತನ್ನನ್ನು ಕಂಡು ಶ್ರೀಹರಿ ಹೆದರಿ ಓಡಿಹೋದ ಎಂದು ತನಗೆ ತಾನೇ ಬೆನ್ನು ತಟ್ಟಿಕೊಂಡು ಲಂಕೆಗೆ ಹಿಂದಿರುಗಿದನು
1.4.07
bali chakravarthi - ravana story
Subscribe to:
Post Comments (Atom)
No comments:
Post a Comment